ನಗರ್ತ ಸಮಾಜದ ಹಿರಿಯರು ಬಹಳ ಹಿಂದೆಯೇ ಅಂದರೆ 1919 ರಲ್ಲಿಯೇ ಸಮಾಜದ ಮಕ್ಕಳ ವಿದ್ಯಾರ್ಜನೆಗೆ ವಿದ್ಯಾರ್ಥಿನಿಲಯದ ಅವಶ್ಯಕತೆಯನ್ನು ಮನಗಂಡು ವಿದ್ಯಾರ್ಥಿನಿಲಯವನ್ನು ನಡೆಸುವ ಸದುದ್ದೇಶದಿಂದ ಎ.ಎಸ್.ವಿ.ಎನ್.ವಿ. ಸಂಘವನ್ನು ಸ್ಥಾಪಿಸಿದ್ದರು. ಆದರೆ, ಎ.ಎಸ್.ವಿ.ಎನ್.ವಿ. ವಿದ್ಯಾರ್ಥಿನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಸ್ಥಾಪನೆಗೆ ಕಾಲ ಕೂಡಿಬಂದಿರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಸಂಘದ ಸ್ಥಾಪನೆ ಮಾಡಬೇಕೆಂಬ ಆಸೆಯು ಕೆಲವು ಹಿರಿಯ ವಿದ್ಯಾರ್ಥಿಗಳಲ್ಲಿ ಚಿಗುರೊಡೆಯಿತು. ಇದರ ಫಲವಾಗಿ ಎ.ಎಸ್.ವಿ.ಎನ್.ವಿ. ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿದ ಸಮಾನ ಮನಸ್ಕ ಹಿರಿಯ ವಿದ್ಯಾರ್ಥಿಗಳು ಬಿ.ಕೆ. ಮರಿಯಪ್ಪ ವಿದ್ಯಾರ್ಥಿನಿಲಯ, ಎಸ್.ಆರ್.ಎನ್.ಜಿ. ಸಂಪನ್ನಪ್ಪ ವಿದ್ಯಾರ್ಥಿನಿಲಯ ಹಾಗೂ ಇತರೆ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘಗಳು ಚಾಲ್ತಿಯಲ್ಲಿರುವುದನ್ನು ಗಮನಿಸಿ ಎ.ಎಸ್.ವಿ.ಎನ್.ವಿ. ವಿದ್ಯಾರ್ಥಿನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಸ್ಥಾಪನೆಯ ಅವಶ್ಯಕತೆಯನ್ನು ಮನಗಂಡು ದಿನಾಂಕ: 25-09-2008 ರಂದು ಸಭೆ ಸೇರಿ “ಎ.ಎಸ್.ವಿ.ಎನ್.ವಿ. ಹಿರಿಯ ವಿದ್ಯಾರ್ಥಿಗಳ ಸಂಘ” ವನ್ನು ಸ್ಥಾಪಿಸುವುದರೊಂದಿಗೆ ಅದೇ ದಿನ ಸಂಘದ ಪ್ರಥಮ ಸಂಸ್ಥಾಪನಾ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದಿತು.
ಈ ಸಂಸ್ಥಾಪನಾ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷರಾಗಿ ಶ್ರೀ ಬಿ.ಕುಮಾರ್ ರವರು, ಉಪಾಧ್ಯಕ್ಷರಾಗಿ ಶ್ರೀಮತಿ ಎಂ.ವಿ. ಮಾನಸ ಚಂದ್ರಿಕಾ ರವರು, ಗೌ.ಕಾರ್ಯದರ್ಶಿಗಳಾಗಿ ಶ್ರೀ ಗಿರೀಶ್.ಸಿ ರವರು, ಸಹ ಕಾರ್ಯದರ್ಶಿಗಳಾಗಿ ಶ್ರೀ ಎಂ. ಮಹೇಶ್ ಕುಮಾರ್ ರವರು ಹಾಗೂ ಖಜಾಂಚಿಗಳಾಗಿ ಶ್ರೀ ಆರ್. ಹರೀಶ್ ರವರು ಅಧಿಕಾರ ಸ್ವೀಕರಿಸಿರುತ್ತಾರೆ.
ಸಂಘದ ಧ್ಯೇಯೋದ್ದೇಶಗಳನ್ನು ಪಟ್ಟಿ ಮಾಡಿ ಸಂಘಕ್ಕೆ ಪೋಷಕರು ಹಾಗೂ ಅಭಿಮಾನಿಗಳಿಂದ ಹಣ ಸಂಗ್ರಹ ಮಾಡಿ ಎ.ಎಸ್.ವಿ.ಎನ್.ವಿ. ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಳ್ಳಲು ಸದಸ್ಯತ್ವದ ಅಭಿಯಾನಗಳನ್ನು ಕೈಗೊಳ್ಳಲಾಯಿತು.
ನಿರ್ದಿಷ್ಟ ಸದಸ್ಯಬಲದೊಂದಿಗೆ ದಿನಾಂಕ: 12-10-2008 ರಂದು ಬೆಂಗಳೂರಿನ ಗಾಂಧಿ ಬಜಾರಿನಲ್ಲಿರುವ ಶ್ರೀ ನಗರೇಶ್ವರ ಸ್ವಾಮಿ ಜ್ಙಾನಮಂದಿರದಲ್ಲಿ ಸಾಹಿತಿಗಳು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಡಾ|| ದೊಡ್ಡರಂಗೇಗೌಡರ ಅಮೃತಹಸ್ತದಿಂದ “ಎ.ಎಸ್.ವಿ.ಎನ್.ವಿ ಹಿರಿಯ ವಿದ್ಯಾರ್ಥಿಗಳ ಸಂಘ” ದ ಉದ್ಘಾಟನೆಯನ್ನು ನೆರವೇರಿಸಲಾಯಿತು.ತದನಂತರ ಸಂಘದಿಂದ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಕೈಗೊಂಡು ಸಂಘವನ್ನು ಆರ್ಥಿಕವಾಗಿ ಮತ್ತಷ್ಟು ಸದೃಡಗೊಳಿಸುವ ನಿಮಿತ್ತ, ಸಂಘದ ನೋಂದಣಿ ಹಾಗೂ ಸಂಘಕ್ಕೆ ಬೈಲಾದ ಅವಶ್ಯಕತೆಯಿರುವುದನ್ನು ಮನಗಂಡು, ಈ ಕಾರ್ಯಗಳನ್ನು ನಿರ್ವಹಿಸಲು ದಿನಾಂಕ: 15-11-2009 ರಂದು ಒಂದು ಸರ್ವ ಸದಸ್ಯರ ಸಭೆಯನ್ನು ನಡೆಸಿ ನೂತನ ತಾತ್ಕಾಲಿಕ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಈ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷರಾಗಿ ಶ್ರೀ ಕೆ.ಸಿ.ಜಯಕುಮಾರ್ ರವರು, ಉಪಾಧ್ಯಕ್ಷರಾಗಿ ಶ್ರೀ ಬಿ.ಕುಮಾರ್ ರವರು, ಗೌ.ಕಾರ್ಯದರ್ಶಿಗಳಾಗಿ ಶ್ರೀ ಎಂ.ಎಸ್.ಕೃಷ್ಣಮೂರ್ತಿ ರವರು, ಸಹ ಕಾರ್ಯದರ್ಶಿಗಳಾಗಿ ಶ್ರೀ ಎಂ.ಮಹೇಶ್‌ಕುಮಾರ್ ರವರು ಹಾಗೂ ಖಜಾಂಚಿಗಳಾಗಿ ಶ್ರೀ ಎ.ಬಸಪ್ಪ ರವರು ಆಯ್ಕೆಯಾದರು. ಇದೇ ದಿನ ಸಂಘದ ನೀತಿ ನಿಯಮಗಳನ್ನು ರೂಪಿಸಲು ಬೈಲಾ ತಯಾರಿಕೆಗಾಗಿ ನಗರ್ತ ಸಮಾಜದ ಹಿರಿಯರಾದ ಹಾಗೂ ಅನುಭವಿಗಳಾದ ಶ್ರೀಯುತ ಎನ್. ಪುಟ್ಟರುದ್ರಪ್ಪ ರವರ ಅಧ್ಯಕ್ಷತೆಯಲ್ಲಿ ಬೈಲಾ ಕಮಿಟಿಯನ್ನು ರಚಿಸಲಾಯಿತು. ಈ ಬೈಲಾ ಕಮಿಟಿಗೆ ಹಿರಿಯರು ಹಾಗೂ ಅನುಭವಿಗಳೂ ಆದ ಶ್ರೀ ಪಿ.ರುದ್ರಪ್ಪ ರವರು, ಶ್ರೀ ಸಿ.ರಾಜಶೇಖರ್ ರವರು, ಶ್ರೀ ಎ.ಬಸಪ್ಪ ನವರು, ಶ್ರೀ ಎಂ.ಬಸವರಾಜು ರವರು, ಶ್ರೀ ಎನ್.ನಾಗರಾಜ್ ರವರು ಶ್ರೀ ಕೆ.ಸಿ.ಜಯಕುಮಾರ್ ರವರು ಹಾಗೂ ಶ್ರೀ ಎಂ.ಎಸ್.ಕೃಷ್ಣಮೂರ್ತಿ ರವರುಗಳನ್ನು ಆಯ್ಕೆ ಮಾಡಲಾಯಿತು.
ಹಲವಾರು ಸಭೆಗಳನ್ನು ನಡೆಸಿದ ಬೈಲಾ ಕಮಿಟಿಯು ನೀಡಿದ ಒಂದು ಉತ್ತಮವಾದ ಬೈಲಾಗೆ ದಿನಾಂಕ:21-03-2010 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಈ ರೀತಿ ಅನುಮೋದನೆಗೊಂಡ ಬೈಲಾದೊಂದಿಗೆ ಸಂಘವು “ಎ.ಎಸ್.ವಿ.ಎನ್.ವಿ.ಸಂಘದ ಹಿರಿಯ ವಿದ್ಯಾರ್ಥಿಗಳ ಸಂಘ” ಎಂಬ ಹೊಸ ನಾಮಾಂಕಿತ ದೊಂದಿಗೆ ದಿನಾಂಕ : 28-08-2010 ರಂದು ನೋಂದಣಿಯಾಗಿರುತ್ತದೆ. ಈ ಬೈಲಾದಲ್ಲಿನ ನಿಯಮಗಳಂತೆ ಸಂಘವು ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿರುತ್ತದೆ.
ಸಂಘವು ವಿದ್ಯಾನಿಧಿ, ವೃದ್ಧಾಪ್ಯನಿಧಿ, ಸ್ನೇಹ ಸಮ್ಮಿಲನ ನಿಧಿ, ಉತ್ತಮ ವಿದ್ಯಾರ್ಥಿ ಪುರಸ್ಕಾರ, ವಿದ್ಯಾ ಪೋಷಕರು ಎಂಬ ಯೋಜನೆಗಳೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರತಿ ವರ್ಷವೂ “ಸ್ನೇಹ ಸಮ್ಮಿಲನ” ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿನಿಲಯದ ಹಿರಿಯ ವಿದ್ಯಾರ್ಥಿಗಳನ್ನು ಒಂದೆಡೆ ಒಗ್ಗೂಡಿಸುವ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.